Tuesday 7 July 2015

On Converting Jayanagar BDA Complex into Mall

Wait and Watch - Do not panic: Government planning of replacing BDA complex into mall with all latest world-class facilities is good news for most. Jayanagar ward has highest trees on it's streets, top class stadium, 5 Lakhs liter rain water harvesting facility and now top class mall.
Any developments will have two mixed reactions from public. Merchants need not to panic as it will have fair shop distribution. Merchants should extend their support for new developments. There could be little inconvenience during the construction, but you feel happy after the completion of the work.
ಎಲ್ಲಾ ರೀತಿಯ ಅನುಕೂಲಗಳಿರುವ ಒಂದು ಸುಸಜ್ಜಿತ ಸರ್ಕಾರಿ ಸ್ವಾಮ್ಯದ ಮಾಲ್ ಈ ಭಾಗದಲ್ಲಿ ತಲೆ ಎತ್ತಲಿದೆ ಎನ್ನುವುದು ಸಾಮಾನ್ಯವಾಗಿ ಈ ಭಾಗದ ಜನರಲ್ಲಿ ಹರ್ಷವನ್ನು ಹೆಚ್ಚಿಸುವ ಸಂಗತಿಯಾಗಿದೆ. ಅತಿ ಹೆಚ್ಚು ಗಿಡ–ಮರಗಳನ್ನು ಉಳಿಸಿಕೊಂಡಿರುವುದು, ಅತ್ಯುತ್ತಮ ಕ್ರೀಡಾಂಗಣವನ್ನು ಹೊಂದಿರುವುದು, 5 ಲಕ್ಷ ಲೀಟರ್‌ ಮಳೆ ಸಂಗ್ರಹದ ವ್ಯವಸ್ಥೆಯನ್ನು ಹೊಂದಿರುವುದು ಸೇರಿದಂತೆ ಅನೇಕ ವಿಚಾರಗಳಲ್ಲಿ ವಿಶಿಷ್ಟ ಹೆಜ್ಜೆ ಇಟ್ಟಿರುವ ಜಯನಗರಕ್ಕೆ ಇದೊಂದು ಕಿರೀಟ ಸೇರ್ಪಡೆಗೊಳ್ಳಲಿದೆ.
ಆದರೆ ಯಾವುದೇ ಹೊಸ ಬದಲಾವಣೆಯಾದರೂ ಅಲ್ಲಲ್ಲಿ ಅಸಮಾಧಾನ ಏಳುವುದು ಸಾಮಾನ್ಯ. ಆದರೆ ವರ್ತಕರು ಅನಗತ್ಯ ಕಳವಳ, ಭಯ ಪಡುವುದು ಬೇಡ. ಯಾರಿಗೂ ಅನ್ಯಾಯ ಆಗದಂತೆ ಮಳಿಗೆಗಳನ್ನು ಹಂಚಲಾಗುತ್ತದೆ. ಅಭಿವೃದ್ಧಿ ಕಾರ್ಯಕ್ಕೆ ಅವರೂ ಸಹಕಾರ ನೀಡಬೇಕು. ಮಾರುಕಟ್ಟೆ ಸ್ಥಾಯಿ ಸಮಿತಿಯೊಂದಿಗೆ ಚರ್ಚಿಸಿ, ಆಯುಕ್ತರ ನೆರವಿನಿಂದ ಈಗಾಗಲೇ ಸೂಕ್ತ ಯೋಜನೆಯನ್ನು ರೂಪಿಸಲಾಗಿದೆ. ಬಾಡಿಗೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಮಳಿಗೆಗಳ ಹಂಚಿಕೆಯ ವಿಷಯದಲ್ಲಿ ವರ್ತಕರ ಆಶಯವನ್ನೂ ಗಮನದಲ್ಲಿ ಇಟ್ಟುಕೊಳ್ಳಲಾಗಿದೆ.
ಈಗ ಯಾರು ಕೆಳಗಿನ ಮಹಡಿಗಳಲ್ಲಿ ಇದ್ದಾರೆ ಅವರಿಗೆ ಕೆಳಗಡೆಯೇ ಜಾಗ ಹೊಂದಿಸಿಕೊಡಲು ಪ್ರಯತ್ನಿಸಲಾಗುತ್ತದೆ. ಎಲ್ಲಾ ರೀತಿಯ ಸೌಕರ್ಯಗಳಿರುವ, ಅಂದವಾದ, ಅಚ್ಚುಕಟ್ಟಾದ ಮಾಲ್‌ ರೂಪುಗೊಳ್ಳಲಿದೆ ಎನ್ನುವುದಕ್ಕೆ ಎಲ್ಲರೂ ಸಂತೋಷ ಪಡಬೇಕು. ಕಾಮಗಾರಿ ನಡೆಯುವಾಗ ವ್ಯಾಪಾರಕ್ಕೆ, ಗ್ರಾಹಕರಿಗೆ ಸ್ವಲ್ಪ ತೊಂದರೆ ಆಗಬಹುದಷ್ಟೇ. ಇದು ಪೂರ್ಣಗೊಂಡ ಮೇಲೆ ನಿಜವಾದ ಸ್ವರೂಪ ನೋಡಿ ಗ್ರಾಹಕರೂ, ವರ್ತಕರೂ ಖಂಡಿತ ಖುಷಿ ಪಡುತ್ತಾರೆ.
N. Nagaraju, Ex-Corporator (Byrasandra Ward 169)

Visit site for more info
FB Fan Page: Facebook
Follow: Twitter
Follow: Pinterest
Watch Video: YouTube
Watch Video: vimeo

No comments:

Post a Comment